ಮಣ್ಣು ಪರೀಕ್ಷೆ ಮಾಡಿಸುವ ರೈತರು ಯಾವುದೋ ಮೂಲೆಯಲ್ಲಿ ಮಣ್ಣು ತಂದು ಮಣ್ಣು ಪರೀಕ್ಷೆ ಮಾಡಿಸುವಂತಿಲ್ಲ ಅದಕ್ಕೆ ತನ್ನದೇ ಆದ ಕೆಲವು ನಿಯಮಗಳಿವೆ.
ಹಸುವಿನ ಹೊಟ್ಟೆತುಂಬಾ ಪ್ಲಾಸ್ಟಿಕ್ !!?
ಮೊದಲನೆಯದಾಗಿ ಮಣ್ಣು ಪರೀಕ್ಷೆ ಮಾಡಿಸುವ ಜಾಗ ದ ಒಟ್ಟು ವಿಸ್ತೀರ್ಣ ನೋಡಿಕೊಳ್ಳಬೇಕು
ಮಣ್ಣಿನ ಮಾದರಿಯನ್ನು ಎಷ್ಟು ಆಳದಿಂದ ತೆಗೆಯಬೇಕು.
👉ವಾರ್ಷಿಕ ಅಥವಾ ಕಡಿಮೆ ಅವಧಿ ಕೃಷಿ ಬೆಳೆಗಳಿಗೆ 15 ಸೆಂಟಿಮೀಟರ್ (ಉದಾಹರಣೆ ರಾಗಿ, ಜೋಳ, ಭತ್ತ, ತೊಗರಿ ಮುಂತಾದವುಗಳು)
ಅವ್ವಾರ್ಷಿಕ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ನಾಲ್ಕು ಗಿಡಗಳ ಮಧ್ಯೆ ಒಂದರಂತೆ 30 ಸೆಂಟಿಮೀಟರ್ ಆಳ ಇರಬೇಕು(ಉದಾಹರಣೆ ತೆಂಗು, ಅಡಿಕೆ, ಬಾಳೆ ಮುಂತಾದವುಗಳು)
ಮೇವಿನ ಬೆಳೆಗಳು ಇದ್ದಲ್ಲಿ 30ರಿಂದ 60 ಸೆಂಟಿಮೀಟರ್ ಆಳದಲ್ಲಿ ಮಣ್ಣಿನ ಮಾದರಿಯನ್ನು ತೆಗೆಯಬೇಕು.
ಮಣ್ಣಿನ ಮಾದರಿಯನ್ನು ತೆಗೆಯುವಾಗ ವಹಿಸಬೇಕಾದ ಅಂಶಗಳು
👉 ಮಣ್ಣಿನ ಮಾದರಿಗಳನ್ನು ಈ ಸೂಚಿಸಿರುವ ಜಾಗದಲ್ಲಿ ತೆಗೆಯಬಾರದು
1) ಗೊಬ್ಬರ ಸಂಗ್ರಹಿಸಿಟ್ಟ ಸ್ಥಳದ ಹತ್ತಿರ ತೆಗೆಯಬಾರದು❌
2) ನೀರು ನಿಂತ ಜಾಗ ತೆಗೆಯಬಾರದು❌
3) ಕಟ್ಟಡ ಸಮೀಪ ಮತ್ತು ಗಿಡಗಳ ಕೆಳಗೆ ತೆಗೆಯಬಾರು❌
4) ರಸ್ತೆಯ ಪಕ್ಕದಲ್ಲಿ ಮತ್ತು ಬದುಗಳ ಪಕ್ಕ ತೆಗೆಯಬಾರದು ❌
5) ಕಸ ಹಾಕಿದ ಜಾಗ ಮತ್ತು ಇಂಗುಗುಂಡಿಯ ಬಾವಿಯ ಸಮೀಪ ತೆಗೆಯಬಾರದು ❌
6) ಬೆಳೆಗಳ ಸಾಲುಗಳಲ್ಲಿ ತೆಗೆಯಬಾರದು❌
👇👇👇👇👇👇👇👇👇👇👇👇👇👇
ಮಣ್ಣು ಸಂಗ್ರಹಿಸಿದ ನಂತರ ಅನುಸರಿಸಬೇಕಾದ ವಿಧಾನ
👇👇👇👇👇👇👇👇👇👇👇👇👇👇
ಹೊಲದಲ್ಲಿ 8-10 ಜಾಗಗಳಲ್ಲಿ Z ಆಕಾರದಲ್ಲಿ ತಿರುಗಾಡಿ V ಆಕಾರದ ಗುಂಡಿ ತೆಗೆಯಬೇಕು.
ತೆಂಗಿನ ಅಥವಾ ಅಡಿಕೆ ತೋಟದಲ್ಲಿ 4 ಮರಗಳ ಮಧ್ಯೆ ಭಾಗದಲ್ಲಿ 8- 10 ಜಾಗಗಳಲ್ಲಿ ತೆಗೆಯಬೇಕು
ಮಣ್ಣು ಸಂಗ್ರಹಿಸಿದ ನಂತರ ಎಲ್ಲಾ ಭಾಗದ ಮಣ್ಣನ್ನು ಸೇರಿಸಿ ವೃತ್ತಾಕಾರದಲ್ಲಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ವೃತ್ತಾಕಾರ ವನ್ನು ನಾಲ್ಕು ಭಾಗಗಳನ್ನಾಗಿ ಮಾಡಿಕೊಳ್ಳಬೇಕು.
ನಂತರ ಒಂದು ಭಾಗವನ್ನು ಆಯ್ಕೆ ಮತ್ತು ಅದರ ವಿರುದ್ಧ ಭಾಗವನ್ನು ಕೂಡ ಆಯ್ಕೆ ಮಾಡಬೇಕು ಆಯ್ಕೆ ಮಾಡಿದ ಎರಡು ಭಾಗವನ್ನು ತೆಗೆದುಹಾಕಬೇಕು.
ತೆಂಗಿನ ಕೃಷಿ ಬಗ್ಗೆ ಸಮಗ್ರ ಮಾಹಿತಿ
ಈ ರೀತಿ ಮಣ್ಣು ಅರ್ಧ ಕಿಲೋ ಗ್ರಾಂ ಆಗೋವವರೆಗೂ ಮಾಡಬೇಕು.
ಅದನ್ನು ನಂತರ ಒಂದು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ
ಹೆಸರು ಊರು ಸರ್ವೆ ನಂಬರ್ ಬೋರ್ವೆಲ್ ಇದ್ದರೆ ಅದನ್ನು ಉಲ್ಲೇಖಿಸಬೇಕು ನಂತರ ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು.
ಮಾಹಿತಿ: ಕೃಷಿ ವಿಜ್ಞಾನ ಕೇಂದ್ರ ತುಮಕೂರು
ಇಲ್ಲಿ ಕೆಳಗಡೆ ನೋಡಿ 👇👇👇👇👇👇👇
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ