ಕುರಿ ಮತ್ತು ಮೇಕೆ ಸಾಕಾಣಿಕೆ ಕೆಲವು ಸಲಹೆಗಳು
ಕುರಿ-ಮೇಕೆ ಸಾಕಾಣಿಕೆ ಮಾಡುವಾಗ ಪಶುವೈದ್ಯರ ಸಲಹೆ ಸೂಚನೆಗಳನ್ನು ಪಡೆಯಬೇಕು. ಕಾಲಕಾಲಕ್ಕೆ ಮುಂಜಾಗೃತವಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ರಾಸುಗಳಿಗೆ ಕಾಯಿಲೆಗಳು ಬಾರದಂತೆ ಎಚ್ಚರಿಕೆವಹಿಸಬೇಕು. ಅವರು ಯಾವ ಕಾಲಕ್ಕೆ ಯಾವ ಲಸಿಕೆಯನ್ನು ಹಾಕಿಸಬೇಕು. ಅವುಗಳ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ವಿವರವಾಗಿ ತಿಳಿದುಕೊಂಡಿರಬೇಕು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆಯಬೇಕಾದರೆ ಮೊದಲು ಸ್ಥಳೀಯ ಕುರಿ ಪೋಷಕರ ಸಂಘದಲ್ಲಿ ಸದಸ್ಯತ್ವವನ್ನು ಪಡೆಯಬೇಕು. ಈ ರೀತಿ ಸದಸ್ಯರಾಗುವುದರಿಂದ ವಿಮಾ ಸೌಲಭ್ಯ, ಕುರಿಸಾಕಾಣಿಕೆದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ರಿಯಾಯಿತಿ ದರದಲ್ಲಿ ಅಭಿವೃದ್ಧಿಪಡಿಸಿರುವಂತಹ ಉತ್ತಮ ತಳಿಯ ಟಗರು ಸೇರಿದಂತೆ ಇನ್ನು ಅನೇಕ ಸವಲತ್ತುಗಳು ದೊರೆಯಲಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕುರಿಸಾಕಾಣಿಕೆ ಮಾಡಬೇಕು.
ಕೆಲವರು ಕುರಿಗಳ ಶೆಡ್‌ಗಳನ್ನು ನಿರ್ಮಿಸಿ ಉತ್ತಮ ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಸ್ವಂತ ಬಂಡವಾಳ ಹೂಡಿ ವಿವಿಧ ಕುರಿಗಳನ್ನು ಸಾಕುತ್ತಿದ್ದಾರೆ. ಒಣಹುಲ್ಲು, ರೇಷ್ಮೆ ಸೊಪ್ಪು, ಇತರೆ ಸೊಪ್ಪುಗಳನ್ನು ಮೇವಿಗಾಗಿ ಬಳಸಲಾಗುತ್ತಿದೆ. ಇನ್ನು ದಷ್ಟಪುಷ್ಟವಾಗಿ ಕುರಿಗಳ ತೂಕ ಹೆಚ್ಚಿಸಲು ಹಿಂಡಿ, ಬೂಸ, ರಾಗಿ ಮುದ್ದೆ ನೀರು ಸಕಾಲಕ್ಕೆ ನೀಡಲಾಗುತ್ತದೆ. ಶೆಡ್‌ಗಳನ್ನು ನಿರ್ಮಿಸದೆ ಇರುವ ಹಾಗೂ ಮೇವಿನ ಕೊರತೆ ಇರುವ ರೈತರು ತಮ್ಮ ಕುರಿಗಳನ್ನು ಅಕ್ಕಪಕ್ಕದ ತೋಟಗಳಲ್ಲಿ, ರಸ್ತೆ ಬದಿಯಲ್ಲಿ, ಕೆರೆ ಕುಂಟೆಗಳ ಸಮೀಪದಲ್ಲಿ ಮೇಯಿಸುತ್ತಿದ್ದಾರೆ.ಸರಕಾರದಿಂದ ಬಿಡುಗಡೆಯಾಗುವಂತಹ ಸಬ್ಸಿಡಿ ಸೌಲಭ್ಯ ನೀಡಿ ಉತ್ತೇಜಿಸಿದರೆ ಗ್ರಾಮೀಣ ಭಾಗದಲ್ಲಿ ಕುರಿ ಸಾಕುವವರಿಗೆ ಆರ್ಥಿಕವಾಗಿ ಕುಟುಂಬ ನಿರ್ವಹಣೆಗೆ ಮಾಡಲು ಸಹಕಾರಿಯಾಗುತ್ತದೆ.
ಡಿ.ದೇವರಾಜು ಅರಸ್ ಹಿಂದುಳಿದ ವರ್ಗ ಅಭಿವೃದ್ಧಿ ನಿಗಮ ಲಿಮಿಟೆಡ್
ಕುರಿ / ಮೇಕೆ ಸಾಕಣೆ ಮತ್ತು ಉಣ್ಣೆ ನೇಯ್ಗೆಯಲ್ಲಿ ತೊಡಗಿರುವ ವ್ಯಕ್ತಿಗಳು 1.00 ಲಕ್ಷದ ಸಾಲ ಮೊತ್ತವನ್ನು 4% ಬಡ್ಡಿಯೊಂದಿಗೆ ವಿಸ್ತರಿಸುತ್ತಾರೆ. ಇದು ಫಲಾನುಭವಿಯ ಪ್ರತಿ 10000 / – ಸಬ್ಸಿಡಿ ಒಳಗೊಂಡಿದೆ.
ಧನ್ಯವಾದಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ