Place your personal items like car keys, Bluetooth headset, mobile phones at unique place to find out easily .....
ಕುರಿ ಮತ್ತು ಮೇಕೆ ಸಾಕಾಣಿಕೆ ಕೆಲವು ಸಲಹೆಗಳು ಕುರಿ-ಮೇಕೆ ಸಾಕಾಣಿಕೆ ಮಾಡುವಾಗ ಪಶುವೈದ್ಯರ ಸಲಹೆ ಸೂಚನೆಗಳನ್ನು ಪಡೆಯಬೇಕು. ಕಾಲಕಾಲಕ್ಕೆ ಮುಂಜಾಗೃತವಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ರಾಸುಗಳಿಗೆ ಕಾಯಿಲೆಗಳು ಬಾರದಂತೆ ಎಚ್ಚರಿಕೆವಹಿಸಬೇಕು. ಅವರು ಯಾವ ಕಾಲಕ್ಕೆ ಯಾವ ಲಸಿಕೆಯನ್ನು ಹಾಕಿಸಬೇಕು. ಅವುಗಳ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ವಿವರವಾಗಿ ತಿಳಿದುಕೊಂಡಿರಬೇಕು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆಯಬೇಕಾದರೆ ಮೊದಲು ಸ್ಥಳೀಯ ಕುರಿ ಪೋಷಕರ ಸಂಘದಲ್ಲಿ ಸದಸ್ಯತ್ವವನ್ನು ಪಡೆಯಬೇಕು. ಈ ರೀತಿ ಸದಸ್ಯರಾಗುವುದರಿಂದ ವಿಮಾ ಸೌಲಭ್ಯ, ಕುರಿಸಾಕಾಣಿಕೆದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ರಿಯಾಯಿತಿ ದರದಲ್ಲಿ ಅಭಿವೃದ್ಧಿಪಡಿಸಿರುವಂತಹ ಉತ್ತಮ ತಳಿಯ ಟಗರು ಸೇರಿದಂತೆ ಇನ್ನು ಅನೇಕ ಸವಲತ್ತುಗಳು ದೊರೆಯಲಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕುರಿಸಾಕಾಣಿಕೆ ಮಾಡಬೇಕು. ಕೆಲವರು ಕುರಿಗಳ ಶೆಡ್‌ಗಳನ್ನು ನಿರ್ಮಿಸಿ ಉತ್ತಮ ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಸ್ವಂತ ಬಂಡವಾಳ ಹೂಡಿ ವಿವಿಧ ಕುರಿಗಳನ್ನು ಸಾಕುತ್ತಿದ್ದಾರೆ. ಒಣಹುಲ್ಲು, ರೇಷ್ಮೆ ಸೊಪ್ಪು, ಇತರೆ ಸೊಪ್ಪುಗಳನ್ನು ಮೇವಿಗಾಗಿ ಬಳಸಲಾಗುತ್ತಿದೆ. ಇನ್ನು ದಷ್ಟಪುಷ್ಟವಾಗಿ ಕುರಿಗಳ ತೂಕ ಹೆಚ್ಚಿಸಲು ಹಿಂಡಿ, ಬೂಸ, ರಾಗಿ ಮುದ್ದೆ ನೀರು ಸಕಾಲಕ್ಕೆ ನೀಡಲಾಗುತ್ತದೆ. ಶೆಡ್‌ಗಳನ್ನು ನಿರ್ಮಿಸದೆ ಇರುವ ಹಾಗೂ ...

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ