ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವ ರೈತರು ಸ್ವಲ್ಪ ಎಚ್ಚರವಾಗಿರಿ. ಕೆ ಜಿ ತೂಕದಲ್ಲಿ ಯಾವ ರೀತಿ ಮೋಸ ಮಾಡುತ್ತಾರೆ ನೋಡಿ ??ಹೊಟ್ಟೆ ತುಂಬಾ ನೀರು!!!
ಕೋರೋನ ಸಂಕಷ್ಟದಿಂದಾಗಿ ಸಾಕಷ್ಟು ಯುವಜನತೆ ಕುರಿ ಸಾಕಾಣಿಕೆ ಮಾಡಲು ಮುಂದಾಗಿದೆ ಆದರೆ ಅದರಲ್ಲಿ ಹೆಚ್ಚು ಪರಿಣತಿ ಪಡೆಯದೆ ಕುರಿ ಸಾಕಾಣಿಕೆ ಅಥವಾ ಮೇಕೆ ಸಾಕಾಣಿಕೆ ಮಾಡಿದ್ದಲ್ಲಿ ನೀವು ಲಾಭಕ್ಕಿಂತ ನಷ್ಟವೆ ಹೆಚ್ಚು ಮಾಡಿಕೊಳ್ಳುತ್ತೀರಿ ಇದಕ್ಕೆ ಒಂದು ನಿದರ್ಶನ ಈ ಮಾಹಿತಿ.
ಈ ಕೆಳಗಿನ ಫೋಟೋದಲ್ಲಿ ನೋಡಿ ಕೆಲ ರೈತರು ಗಳು ಹಣದ ಆಸೆಗಾಗಿ ರೈತನ ನೈತಿಕತೆ ಮತ್ತು ವ್ಯಾಪಾರದ ನಿಷ್ಠೆಯನ್ನು ಮರೆತು ಕೆಜಿ ತೂಕದಲ್ಲಿ ಮಾರುವ ಮೇಕೆ ಅಥವಾ ಕುರಿಗಳಿಗೆ ಹೊಟ್ಟೆ ತುಂಬಾ ನೀರನ್ನು ಕುಡಿಸಿ ಸಂತೆಯಲ್ಲಿ ಮಾರಲು ಮುಂದಾಗಿದ್ದಾರೆ.
ಆದ್ದರಿಂದ ಮೇಕೆ ,ಕುರಿ ಕೊಳ್ಳುವಾಗ ಕುರಿ ಅಥವಾ ಮೇಕೆ ಕೊಂಡ ಮೇಲೆ ಸುಮಾರು ನಾಲ್ಕರಿಂದ ಐದು ತಾಸು ಆದಮೇಲೆ ಮತ್ತೆ ತೂಕ ಮಾಡಿ ಪೂರ್ಣ ಹಣವನ್ನು ಕೊಡಬೇಕು, ಈ ರೀತಿ ಮಾಡಿದರೆ ಅವರು ಕುಡಿಸಿದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ನಂತರ ನಿಜವಾದ ತೂಕ ನಿಮಗೆ ಸಿಗುತ್ತದೆ ಇಲ್ಲವಾದಲ್ಲಿ ನೀವು ನಷ್ಟ
ಅನುಭವಿಸುವುದು ಖಂಡಿತ.
ಈ ರೀತಿ ಮಾಡಿದರೆ ಸರಿಯಾಗುತ್ತದೆ ಎನ್ನುವರು ಈ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ಮತ್ತು ನಿಮ್ಮ ಅಭಿಪ್ರಾಯ ಅನುಭವ ಗಳನ್ನು ತಿಳಿಸಿ ಎಲ್ಲರಿಗೂ ಒಳ್ಳೆಯದಾಗಲಿ.
ಮಾಹಿತಿ ಅಂತರ್ಜಾಲ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ