ಮಾಹಿತಿ ನೀಡಿದವರು
ಪ್ರವೀಣ್.ಸಿ
ಕೃಷಿ ಅಧಿಕಾರಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಯಳಂದೂರು ತಾಲೂಕು
ಚಾಮರಾಜನಗರ ಜಿಲ್ಲೆ
ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆ ಚಿಗುರೊಡೆಯುತ್ತಿದೆ ಬೀಜಗಳ ಸಂಗ್ರಹ, ಉಳುಮೆ, ಬಿತ್ತನೆಹೀಗೆ ರೈತ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಹಾಗೂ ಈ ಕೊರಾನದ ಮಧ್ಯೆ ವೃತ್ತಿಯತ್ತ ಹೊರ ಪ್ರದೇಶಗಳಿಗೆ ವಲಸೆಹೋಗಿದ್ದ ಯುವಕರಿಗೂ ಪಾಳು ಬಿದ್ದಿದ್ದ ಕೃಷಿ ಜಮೀನಿನ ಕಡೆ ಮನಸೆಳೆಯುತ್ತಿದೆ ಕೃಷಿಯನ್ನು ಸುಳಭಗೊಳಿಸಲು ಯಂತ್ರಗಳ ಬಳಕೆಯ ಮೂಲಕ ಕೃಷಿ ಕ್ಷೇತ್ರವನ್ನು ಇನ್ನಷ್ಟು ಸಧೃಡಗೊಳಿಸಬಹುದಾಗಿದೆ.
ರೈತರಿಗೆ ಪ್ರೇರಣೆ ಯಾಂತ್ರೀಕರಣ : ಇತ್ತೀಚಿನ ದಿನಗಳಲ್ಲಿ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಜನರಿಗೆ ಸುಲಭವಾಗಿ ಕೆಲಸಗಳು ದೊರಕುತ್ತಿರುವ ಕಾರಣದಿಂದಾಗಿ ಜಮೀನಿನಲ್ಲಿ ಕರ್ತವ್ಯ ನಿರ್ವಹಿಸುವ ಕೂಲಿ ಕಾರ್ಮಿಕರ ಸಂಖ್ಯೆ ಕ್ರಮೇಣವಾಗಿ ಕ್ಷೀಣಿಸುತ್ತಿದೆ ಪ್ರಸ್ತುತ ಸನ್ನಿವೇಶದಲ್ಲಿ ಯಂತ್ರಗಳ ಆಧುನಿಕತೆ ಅನಿವಾರ್ಯವಾಗಿದೆ.ಯಂತ್ರಗಳ ಬಳಕೆಯಿಂದ ಖರ್ಚು ಕಡಿಮೆಗೊಳಿಸಬಹುದಾಗಿದೆ.ಕೃಷಿಯಲ್ಲಿನ ಖರ್ಚು ಕಡಿಮೆಯಾದಾಗ ಮಾರುಕಟ್ಟೆ ಧಾರಣೆ ಕಡಿಮೆಯಾದರೂ ರೈತರಿಗಾಗುವ ನಷ್ಟದ ಪ್ರಮಾಣವನ್ನು ತಗ್ಗಿಸಬಹುದಾಗಿದೆ.
ಸಾಂಪ್ರದಾಯಕತೆಯಿಂದ ಆಧುನಿಕ ಯಾಂತ್ರೀಕರಣದೆಡೆಗೆ : ಹಿಂದಿನ ದಿನಗಳಲ್ಲಿ ಕೃಷಿಯೇ ಮೂಲ ಕಸುಬಾಗಿತ್ತು ಹೆಚ್ಚಿನವರು ಕೃಷಿಯನ್ನೇ ಜೀವನಾಧಾರವಾಗಿ ನಂಬಿ ಬದುಕುತ್ತಿದ್ದರು ಆದರೆ ಈಗ ಹೊಲದಲ್ಲಿ ದೊರೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ ಆದ್ದರಿಂದ ರೈತರು ಆಧುನಿಕ ಯಂತ್ರ ಬಳಕೆಯತ್ತ ಮುಖ ಮಾಡುತ್ತಿದ್ದಾರೆ.ಆದರೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ದುಬಾರಿ ಬೆಲೆಯ ಯಂತ್ರಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ .ಸರ್ಕಾರಿ ಇಲಾಖೆಗಳಿಂದ ಬೆರಳೆಣಿಕೆಯಷ್ಟು ರೈತರು ಸಹಾಯಧನಗಳೊಂದಿಗೆ ಕೆಲವು ಯಂತ್ರಗಳನ್ನು ಬಳಕೆ ಮಾಡುತ್ತಿದ್ದರೆ ಯಾದರೂ ಎಲ್ಲ ಬಗೆಯ ಯಂತ್ರಗಳನ್ನು ಖರೀದಿಸಲು ಅನುಕೂಲವಾಗುತ್ತಿಲ್ಲ, ಇಂತಹ ಸನ್ನಿವೇಶದಲ್ಲಿ ರೈತರಿಗೆ ಸಹಕಾರಿಯಾಗಲೆಂದು ಕರ್ನಾಟಕ ಸರಕಾರದ ಸಹಯೋಗದೊಂದಿಗೆ 'ಕೃಷಿ ಯಂತ್ರಧಾರೆ" ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಿರ್ವಹಿಸಿಕೊಂಡು ಹೋಗುತ್ತಿದೆ.ಪ್ರಸ್ತುತ ಈ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ರೈತರಿಗೆ ಉಪಯೋಗವಾಗುವಂತಹ ಉಳುಮೆಯಿಂದ ಕಟಾವಿನವರೆಗೂ ಬಳಕೆಯಾಗುವ ಎಲ್ಲಾ ಯಂತ್ರಗಳು ಹೊಂದಿರುವ ಕೇಂದ್ರ ಇದಾಗಿರುತ್ತದೆ.ಸದ್ರಿ ಕೇಂದ್ರವು ಜಿಲ್ಲೆಯ ಹರದನಹಳ್ಳಿ,ಅಗರ,ಬೇಗೂರು,ಹನೂರು ನಾಲ್ಕು ಹೋಬಳಿಗಳಲ್ಲಿ ಕಾರ್ಯರೂಪದಲ್ಲಿರುತ್ತವೆ.
ಭತ್ತ ಬೆಳೆಗಾರನ ಕನಸು ನನಸಾಗಿಸುವ ಯಂತ್ರಶ್ರೀ : ಇದೀಗ ಕ್ರಮೇಣ ಕ್ಷೀಣಿಸುತ್ತಿರುವ ಭತ್ತದ ಬೆಳೆಯನ್ನು ಮರುಜೀವ ತುಂಬಲು ಹಾಗೂ ಅನ್ನ ನೀಡುವ ರೈತನ ಕೈಗಳನ್ನು ಬಲಪಡಿಸಲು ಭತ್ತದ ಬೆಳೆಯಲ್ಲಿ ಬದಲಾವಣೆಯನ್ನು ತರಲು ಪಣತೊಟ್ಟಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮುಂದಾಗಿದ್ದು ರೈತರಿಗೆ ನೂತನವಾಗಿ ಯಾಂತ್ರೀಕರಣದ ಮುಖಾಂತರ ಭತ್ತ ನಾಟಿಯನ್ನು ಸುಲಭವಾಗಿ ನಿರ್ವಹಿಸಲು "ಯಂತ್ರ ಶ್ರೀ" ಎಂಬ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.ಇದು ಭತ್ತ ಬೆಳಿಯುವ ರೈತರ ಜೀವನಕ್ಕೆ ಆಶಾಕಿರಣವಾಗಿದೆ.
ಭತ್ತ ನಾಟಿ ಪದ್ದತಿ ಹಾಗೂ ಯಂತ್ರದ ಬಳಕೆ : ಯಂತ್ರೀಕೃತ ಭತ್ತನಾಟಿಯನ್ನು ಮಾಡಲು ಮೊದಲಿಗೆ ಭೂಮಿಯನ್ನು ಹೆಪ್ಪಿನ ರೀತಿಯಲ್ಲಿ ಹದಮಾಡಿಕೊಂಡು ನಂತರ ನರ್ಸರಿ ಟ್ರೇ ಗಳ ಸಹಕಾರದೊಂದಿಗೆ ಸಸಿಮಡಿಯನ್ನು ತಯಾರುಗೊಳಿಸಿಕೊಳ್ಳಬೇಕು ಈ ನರ್ಸರಿ ಟ್ರೇಗಳು ಒಂದು ಎಕರೆಗೆ 80 ಟ್ರೇಗಳು ಬೇಕಾಗುತ್ತವೆ.ಟ್ರೇನಲ್ಲಿ ತಯಾರಿಸಿದ ನರ್ಸರಿ ಸಸಿಮಡಿಯು ಭಿತ್ತಿದ 18 ನೇ ದಿನಕ್ಕೆ ನಾಟಿಗೆ ತಯಾರಾಗುತ್ತದೆ ಹೀಗೆ ತಯಾರಾದ ಸಸಿಮಡಿಯು ಚಾಪೆಯ ರೀತಿಯಲ್ಲಿ ಸುಭವಾಗಿ ಟ್ರೇಯಿಂದ ಹೊರತೆಗೆಯಬಹುದಾಗಿದೆ ಇದಕ್ಕೆ ಒಬ್ಬ ಅಥವಾ ಎರೆಡು ಕೂಲಿ ಆಳುಗಳು ಬೇಕಾಗುತ್ತಾರೆ.ನಂತರ ರೋಟರಿ,ಗೇಝ್ ವ್ಹೀಲ್,ಟಿಲ್ಲರ್ ನ ಸಹಕಾರದಿಂದ ನೀರುತುಂಬಿಕೊಂಡಿರುವ ಗದ್ದೆಯಲ್ಲಿ ಭತ್ತ ನಾಟಿಗೆ ಭೂಮಿಯನ್ನು ಸಿಧ್ದಗೊಳಿಸಿಕೊಳ್ಳಬೇಕಾಗುತ್ತದೆ ಹೀಗೆ ಸಿದ್ಧಗೊಂಡ ಗದ್ದೆಯಲ್ಲಿ ಟ್ರೇಗಳಲ್ಲಿ ತಯಾರಾದ ಸಸಿಮಡಿಯನ್ನು ನಾಟಿ ಯಂತ್ರದಿಂದ ಮೂರು ಕೂಲಿ ಆಳುಗಳ ಸಹಕಾರದೊಂದಿಗೆ ಕೇವಲ ಒಂದು ಗಂಟೆಯ ಅವಧಿಯಲ್ಲಿ ಒಂದು ಎಕರೆ ಭತ್ತ ನಾಟಿಯನ್ನು ಸುಲಭವಾಗಿ ಮಾಡಬಹುದಾಗಿದೆ.ಈ ಯಂತ್ರವು ಯಳಂದೂರು ತಾಲೂಕಿನ ಅಗರ ಹೋಬಳಿಯ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಲಭ್ಯವಿದೆ.
ಒಂದು ಎಕರೆ ಯಂತ್ರಶ್ರೀ ಭತ್ತ ನಾಟಿಯ ಖರ್ಚು-ವೆಚ್ಚಗಳ ವಿವರ:- 1.ಒಂದು ಎಕರೆ ಭತ್ತ ನಾಟಿಗೆ 10 ರಿಂದ 12 ಕೆ.ಜಿ ಭತ್ತದ ಬೀಜ ಬೇಕಾಗುತ್ತದೆ ಬೀಜದ ಆಯ್ಕೆಯು ರೈತರದ್ದಾಗಿರುತ್ತದೆ.
2.ಒಂದು ಎಕರೆಗೆ 80 ನರ್ಸರಿ ಟ್ರೇಗಳ ಅವಶ್ಯಕತೆಯಿದ್ದು 80 ಟ್ರೇಗಳ ಮೊತ್ತ 1000 ರೂ.
3.ಗದ್ದೆ ಸಿದ್ಧತೆಗೆ ಟ್ಯ್ರಾಕ್ಟರ್ ಚಾಲಿತ ರೋಟರಿ ಹಾಗೂ ಗೇಝ್ ವ್ಹೀಲ್ ನ ಬಾಡಿಗೆ ಮೊತ್ತ 2,000-3,000
4.ಕೂಲಿ ಆಳುಗಳ ಬಳಕೆ ನರ್ಸರಿ ಸಿಧ್ದತೆಗೆ 03 ಹಾಗೂ ನಾಟಿಗೆ 03 ಮಂದಿ ಕೂಲಿ ಆಳುಗಳು ಬೇಕಾಗುತ್ತದೆ.
5.ನಾಟಿ ಯಂತ್ರವು ಒಂದು ಗಂಟೆಗೆ 1,800/- ರೂ ಬಾಡಿಗೆಯನ್ನು ನಿಗಧಿಗೊಳಿಸಿದ್ದು ಒಂದು ಗಂಟೆಯ ಅವಧಿಯಲ್ಲಿ ಒಂದು ಎಕರೆ ನಾಟಿಯಾಗುತ್ತದೆ.
ರೈತ ನ ಅಭಿಪ್ರಾಯ ಈ ತಂತ್ರಜ್ಞಾನ ತಾಂತ್ರಿಕತೆ ಬಗ್ಗೆ
ಧನ್ಯವಾದ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ