ಮಾದರಿ ಚಿತ್ರ
ಶುಂಠಿ ಮಾರುಕಟ್ಟೆ ದರ ಪ್ರತಿದಿನ ಇಳಿಕೆಯಾಗುತ್ತಿರುವುದು ನೋಡಿ ಶುಂಠಿ ಬೆಳೆಗಾರರು ಕಂಗಲಾಗಿದ್ದಾರೆ.
ಕರ್ನಾಟಕ ಸರ್ಕಾರ ಈಗ ಕೆಲ ಬೆಳೆಗಳಿಗೆ ನೀಡುತ್ತಿರುವ ಬೆಂಬಲ ಬೆಲೆ ಶುಂಠಿಗೂ ಸಹ ನೀಡಬೇಕು ಎಂಬುದು ರೈತರ ಅಭಿಪ್ರಾಯವಾಗಿದೆ.
ಇದಕ್ಕೆ ಪ್ರಮುಖ ಕಾರಣ ಲಕ್ಷಾಂತರ ಹಣ ಖರ್ಚು ಮಾಡಿ ಶುಂಠಿ ಬೆಳೆ ನಾನಾ ರೋಗಗಳಿಗೆ ತುತ್ತಾಗುತ್ತದೆ ಅದರಲ್ಲಿ ಪ್ರಮುಖವಾದವುಗಳು ಕೊಳೆರೋಗ, ಬಾಡು ಕೊಳೆ ರೋಗ, ಕ್ಯಾಲ್ಸಿಯಂ ಕೊರತೆ, ಕಬ್ಬಿಣದ ಕೊರತೆ ಮುಂತಾದವುಗಳು.
ರೋಗಗಳಿಗೆ ತುತ್ತಾದ ಎಷ್ಟು ಬೆಳೆಗಳನ್ನು ರೈತರು ಲಾಭಗಳಿಸುವ ಮುನ್ನವೇ ಮಾರಿಬಿಡುತ್ತಾರೆ.
ಒಮ್ಮೆ ಶುಂಠಿ ಬೆಳೆದ ಭೂಮಿಯಲ್ಲಿ ಮತ್ತೊಮ್ಮೆ ಶುಂಠಿ ಬೆಳೆಯಲು ಸುಮಾರು ಮೂರರಿಂದ ಐದು ವರ್ಷಗಳ ಕಾಲಾವಕಾಶ ಬೇಕು ಆದ್ದರಿಂದ ಇದು ರೈತನ ಆರ್ಥಿಕತೆ ಮತ್ತು ಜೀವನವನ್ನು ಅವಲಂಬಿಸಿದೆ.
ಕರ್ನಾಟಕ ಸರ್ಕಾರ ಶುಂಠಿಗೂ ಬೆಂಬಲ ಬೆಲೆ ನೀಡಲು ಒಂದು ಸಮಿತಿ ರಚನೆ ಮಾಡಿ, ಶುಂಠಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಬೆಂಬಲ ಬೆಲೆ ಕೊಡಬೇಕೆಂದು ಕರ್ನಾಟಕದ ಶುಂಠಿ ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಹಸಿಶುಂಠಿ ಬೆಲೆ ರೂ 700 ರಿಂದ ರೂ 1000 ಇದೆ.
ಧನ್ಯವಾದಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ