ಹಸು ಸಾಕಾಣಿಕೆ ಮಾಡುತ್ತಿರುವ ಸಹಸ್ರಾರು ರೈತರು ಎಚ್ಚರಗೊಳ್ಳುವ ಸಮಯ
ಕರೋನಾ ಲಾಕ್ಡೌನ್ ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ತಮ್ಮ ಹಳ್ಳಿಗಳಲ್ಲಿ ಹೈನುಗಾರಿಕೆ ಪ್ರಾರಂಭಿಸಿದ್ದಾರೆ, ಇಂತಹ ಕಠಿಣ ಸಮಯದಲ್ಲಿ ಹೈನುಗಾರಿಕೆ ರೈತರಿಗೆ ಹೊಸ ತಲೆನೋವು ಒಂದು ಪ್ರಾರಂಭಿಸಿದೆ ಅದೇ ಲಿಂಪಿ ಚರ್ಮರೋಗ.
ಲಿಂಪಿ ಚರ್ಮ ರೋಗದ ಲಕ್ಷಣಗಳು
ಹಸುಗಳ ದೇಹದ ಮೈ,ಕಾಲುಗಳು, ಭುಜ,ಕುತ್ತಿಗೆ ಈ ರೀತಿ ದೇಹದ ಎಲ್ಲಾ ಭಾಗಗಳಲ್ಲಿ ಗಡ್ಡೆ ರೀತಿಯ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.
ಹಸುಗಳು ನಿಲ್ಲಲು ಆಗದೆ ನೆಲಕ್ಕೆ ಒರಗಿ ಕೊಳ್ಳುತ್ತವೆ.
ಹಸುಗಳು ನಡೆದಾಡಲು ಮತ್ತು ನಿಲ್ಲಲು ಸಾಧ್ಯವಾಗುವುದಿಲ್ಲ.
ಮುಂಜಾಗೃತ ಕ್ರಮಗಳು ರೈತರ ಮಾಡಬೇಕಾದದ್ದು
👉 ರೋಗದ ಲಕ್ಷಣವಿರುವ ಹಸುಗಳನ್ನು ಪ್ರತ್ಯೇಕ ಮಾಡಿ ಉಪಚರಿಸಬೇಕು.
👉 ಈ ರೋಗವು ಸೊಳ್ಳೆಗಳ ಮೂಲಕ ಹರಡುವ ಸಾಧ್ಯತೆ ಇರುವುದರಿಂದ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಒಳ್ಳೆಯದು.
👉 ರೋಗನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಹಸುಗಳಿಗೆ ಒಳ್ಳೆಯ ಮೇವು ಹಾಗೂ ಆಹಾರ ನೀಡಬೇಕು.
ಈ ಮೇಲಿನ ಎಲ್ಲಾ ಕ್ರಮಗಳನ್ನು ರೋಗ ಲಕ್ಷಣ ಕಂಡು ಬಂದಲ್ಲಿ ಮೊದಲು ಮಾಡಬೇಕು
ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ನಿಮ್ಮ ಊರಿನ ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ