ಕೊಬ್ಬರಿ ಸುಲಿಯುತ್ತಿರುವ ದೃಶ್ಯ
ಕಲ್ಪತರು ನಾಡು ತುಮಕೂರು ಕೊಬ್ಬರಿಗೆ ಪ್ರಸಿದ್ಧಿಯಾಗಿದೆ,
ಕೊಬ್ಬರಿಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ನೋಡೋಣ ಬನ್ನಿ
ಕೊಬ್ಬರಿ ಬೆಲೆ ಇಂದು Rs 11,500 ರೂಪಾಯಿಗಳಿಗೆ ಮರಾಟ ಆಗುತ್ತಿದೆ ,ಇದು ಮಾರುಕಟ್ಟೆ ಚೆನ್ನಾಗಿದ್ದಾಗ ಸುಮಾರು Rs 20,000 ತನಕ ಪ್ರತಿ ನೂರು ಕೆಜಿಗೆ ವ್ಯಾಪಾರವಾಗುತ್ತದೆ.
ತೆಂಗಿನಕಾಯಿಗಳನ್ನು ಸುಮಾರು ಹತ್ತರಿಂದ ಹನ್ನೊಂದು ತಿಂಗಳು ಗಾಳಿ ಸಾವಕಾಶವಾಗಿ ಹರಿದಾಡುವ ಜಾಗದಲ್ಲಿ ಶೇಖರಣೆ ಮಾಡಿದರೆ ತೆಂಗಿನಕಾಯಿಗಳು ಕೊಬ್ಬರಿ ಆಗಿ ಪರಿವರ್ತನೆಯಾಗುತ್ತದೆ. ತೆಂಗಿನಕಾಯಿಗಳನ್ನು ನೀವು ಸಂತೆ,ಕೃಷಿ ಮಾರುಕಟ್ಟೆ ಕೊಂಡಿ ಕೊಂಡು ಕಬ್ಬಿಣದ ಕಾಯಿ ಶೆಡ್ ಅಥವಾ ಮನೆಯಲ್ಲಿ ಅಟ್ಟಗಳನ್ನು ಮಾಡಿ ಶೇಖರಿಸಿ ಕೊಬ್ಬರಿಯನ್ನು ಮಾಡಬಹುದಾಗಿದೆ.
ಕೊಬ್ಬರಿ ಅಥವಾ ತೆಂಗಿನ ಕಾಯಿ ಶೆಡ್ ಶೇಖರಣೆ ಫೋಟೋ
ತೆಂಗಿನ ಕಾಯಿ ಬೆಲೆಯನ್ನು ನೋಡಿ ನೀವು ಸೂಕ್ತ ಸಮಯದಲ್ಲಿ ಕಾಯಿಗಳನ್ನು ಕೊಂಡಿ ಕೊಂಡಲ್ಲಿ ನೀವು ಕೂಡ ಲಕ್ಷ ಲಕ್ಷ ಆದಾಯಗಳಿಸಬಹುದು.
ತೆಂಗಿನಕಾಯಿಗಳ ಆಯ್ಕೆ
ನೀರಾವರಿ ಜಮೀನಿನಲ್ಲಿ ಬೆಳೆದ ಸುಮಾರು ಒಂದು ತೆಂಗಿನ ಕಾಯಿಗಳ ತೂಕ 130 ಗ್ರಾಂ ನಿಂದ 200 ಗ್ರಾಮ್ ವರೆಗೂ ಕೊಬ್ಬರಿ ತೂಕ ಬರುತ್ತದೆ.
ಈ ರೀತಿ ಶೇಖರಿಸಿಟ್ಟ ತೆಂಗಿನ ಕೊಬ್ಬರಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸುಲಿದು ಮಾರಬಹುದು.
ಎಚ್ಚರಿಕೆ
ನೀರಾವರಿ ಜಮೀನಿನಲ್ಲಿ ಬೆಳೆಯದ ತೆಂಗಿನಕಾಯಿಗಳ ಕೊಬ್ಬರಿ ತೂಕ ತೀರಾ ಕಡಿಮೆ ಇರುತ್ತದೆ ಆದ್ದರಿಂದ ತೆಂಗಿನಕಾಯಿಗಳನ್ನು ಕೊಳ್ಳುವಾಗ ನಿಮ್ಮ ಹಿರಿಯರು ಅಥವಾ ಅನುಭವಸ್ಥ ಸ್ನೇಹಿತರನ್ನು ಕರೆದುಕೊಂಡು ಹೋಗಿ ಇಲ್ಲವಾದಲ್ಲಿ ನೀವು ಕೂಡ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಈ ಲಿಂಕನ್ನು ಕ್ಲಿಕ್ ಮಾಡಿ
ಧನ್ಯವಾದಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ