ಮಂಗಗಳನ್ನು ಓಡಿಸಲು ಹೊಸ ಪ್ರಯೋಗ ಒಂದು ಕಬ್ಬಿಣದ ಸಲಾಕೆ ಅಥವಾ ಪೈಪನ್ನು ಉಪಯೋಗಿಸಿಕೊಂಡು ಯಾವ ರೀತಿ ಮಂಗಗಳನ್ನು ಓಡಿಸುವುದು ಎಂದು ಕರ್ನಾಟಕದ ರೈತರೊಬ್ಬರು ಈ ರೀತಿಯ ಪ್ರಯೋಗವನ್ನು ಮಾಡಿದ್ದಾರೆ. ಮಂಗಗಳನ್ನು ಸುಲಭವಾಗಿ ಭಯ ಹುಟ್ಟಿಸುವುದರ ಮೂಲಕ ಓಡಿಸಬಹುದು,ರಾಕೆಟ್ ಪಟಾಕಿ ಗಳನ್ನು ಉಪಯೋಗಿಸಿಕೊಂಡು ಈ ಕಾರ್ಯವನ್ನು ಆರಾಮವಾಗಿ ಮಾಡಬಹುದು ಎಂದು ಈ ರೈತರು ಅಭಿಪ್ರಾಯಪಟ್ಟಿದ್ದಾರೆ.
ಈ ಕೆಳಗಿನ ಫೋಟೋದಲ್ಲಿ ನೀವು ನೋಡುತ್ತಿದ್ದೀರಾ ಈ ಉಪಕರಣಗಳನ್ನು ಬಳಸಿಕೊಂಡು ಮಂಗಗಳನ್ನು ಓಡಿಸುವ ವಿಧಾನ.
ಮಂಗಗಳು ಇರುವ ಕಡೆ ಈ ರೀತಿ ರಾಕೆಟ್ ಪಟಾಕಿಯನ್ನು ಉಡಾಯಿಸು ವುದರ ಮೂಲಕ ಮಂಗಗಳ ಓಡಿಸಬಹುದು.
ಚೌಕಾಕಾರದ ಮಧ್ಯಭಾಗದಿಂದ ಹೊರಟ ಕೈ ಹಿಡಿಯುಳ್ಳ ಕಬ್ಬಿಣದ ಪೈಪ್ ,ಚೌಕಾಕಾರದ ಭಾಗದಲ್ಲಿ ಕೆಂಪು ಬಣ್ಣವನ್ನು ಬಳಸಿದ ಕಾರಣವೇನೆಂದರೆ ಕೆಂಪು ಬಣ್ಣವು ಅತ್ಯಂತ ದೂರದವರೆಗೂ ಕೂಡ ಕಾಣಬಹುದಾದ ಬಣ್ಣವಾಗಿದೆ.ಈ ಚೌಕಾಕಾರದ ಬಣ್ಣ ನಿಂದ ಹೊರಟ ರಾಕೆಟ್ ಪಟಾಕಿ ಮಂಗಗಳು ಮುಂದೆ ಸಿಡಿಯುವುದರಿಂದ ಅವು ಈ ಕೆಂಪು ಬಣ್ಣದ ವಸ್ತುವಿನಿಂದ ಪಟಾಕಿ ಬಂದಿದೆ ಎಂದು ಭಾವಿಸಿ ದೂರ ಓಡಿ ಹೋಗುತ್ತವೆ. ಈ ರೀತಿ ಮಾಡುವುದರಿಂದ ಮಂಗನಿಂದ ಆಗುತ್ತಿರುವ ಬೆಳೆ ಹಾನಿ ಯನ್ನು ತಡೆಗಟ್ಟಬಹುದು.
ಎಚ್ಚರಿಕೆ!
ಬೇಸಿಗೆ ಕಾಲದಲ್ಲಿ ಈ ಉಪಕರಣವನ್ನು ಉಪಯೋಗಿಸುವುದು ಅಷ್ಟು ಸೂಕ್ತವಲ್ಲ ಯಾಕೆಂದರೆ ಒಣಹುಲ್ಲು ಅಥವಾ ಮರದ ಎಲೆಗಳು ಬೆಂಕಿಗೆ ವೇಗವಾಗಿ ಅತ್ತಿ ಕೊಳ್ಳುವುದರಿಂದ ಬೇಸಿಗೆ ಕಾಲದಲ್ಲಿ ಈ ಉಪಕರಣವನ್ನು ಉಪಯೋಗಿಸದೆ ಇರುವುದು ಒಳ್ಳೆಯದು.
ಈ ಲಿಂಕನ್ನು ಕ್ಲಿಕ್ ಮಾಡಿ
ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ
ಧನ್ಯವಾದಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ