ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಜ್ಜಿಯ ತೋಟ ಲಕ್ಷಾಂತರ ಯುವಕರಿಗೆ ಮಾದರಿ

ಇಳಿವಯಸ್ಸಿನಲ್ಲಿ ತೋಟವನ್ನು ಮಗುವಂತೆ ನೋಡಿಕೊಳ್ಳುತ್ತಿರುವ ಅಜ್ಜಿ. 70 ವರ್ಷದ ನಾಗಮ್ಮ ಎನ್ನುವ ಅಜ್ಜಿಯವರು ಅಡಿಕೆ ,ಬಾಳೆ, ಮೆಣಸು ಮುಂತಾದ ಬೆಳೆ ಇರುವ ತೋಟವನ್ನು ಕಸ, ಕಡ್ಡಿ, ಕಳೆ ಇಲ್ಲದೆ ಅತಿ ಹೆಚ್ಚು ಸ್ವಚ್ಛವಾಗಿ ಮಗುವನ್ನು ನೋಡಿಕೊಳ್ಳುವ ರೀತಿ ತನ್ನ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಈ ಅಜ್ಜಿಯ ತೋಟ ಈಗಿನ ಕಾಲದ ಸಾಕಷ್ಟು ಯುವ ರೈತರಿಗೆ ಮಾದರಿಯಾಗಿದೆ. ನಾಗಮ್ಮನವರ ತೋಟ ಮರದಸನಹಳ್ಳಿ ಪಾವಗಡ ತುಮಕೂರು ಜಿಲ್ಲೆಯಲ್ಲಿದೆ.  ಮಾಹಿತಿ ಕೊಟ್ಟವರು ಹೇಮಂತ್ ಕುಮಾರ್                           ಧನ್ಯವಾದಗಳು ಇಂಡಿಯನ್ ಡಿಜಿಟಲ್ ಫಾರ್ಮರ್ ಯುಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.  https://www.youtube.com/channel/UCcN1teLLBMh2hGTNYGzeDFA

How to make owdc English, kannada, tamil, hindi, telugu, malayalam

  ವೇಸ್ಟ್ ಡಿಕಂಪೋಸರ್ ಅನ್ನು ರೈತರಿಗೋಸ್ಕರ ಅಭಿವೃದ್ಧಿಪಡಿಸಲಾಗಿದೆ ಇದನ್ನು ಉಪಯೋಗಿಸಿಕೊಂಡು ರೈತರು ಕೊಟ್ಟಿಗೆ ಗೊಬ್ಬರ ಮತ್ತು ತೋಟದಲ್ಲಿ ಬೆಳೆಯುವ ಕಳೆಯನ್ನು ಬೇಗ ಕೊಳೆಯುವಂತೆ ಮಾಡಿ ಅತ್ಯುತ್ತಮ ಗೊಬ್ಬರವಾಗಿ ಮಾಡಲು ಉಪಯೋಗಿಸುತ್ತಾರೆ. ಬೀಜೋಪಚಾರ ಸಮಯದಲ್ಲಿ ಇದನ್ನು ಉಪಯೋಗಿಸಬಹುದು, ಗಿಡಗಳ ಮೇಲೆ ಸಿಂಪಡಿಸಲು ಉಪಯೋಗಿಸಬಹುದು ಮತ್ತು ಬೆಳೆ ಕಟಾವಿನ ನಂತರ ಭೂಮಿ ಮೇಲೆ ಸಿಂಪಡಿಸಬಹುದು. ವೇಸ್ಟ್ ಡಿಕಂಪೋಸರ್ ಬಳಕೆ ಮಳೆಗಾಲದಲ್ಲಿ ಮಾಡುವುದರಿಂದ ಹೆಚ್ಚು ಉಪಯೋಗವಿದೆ. ಹೆಚ್ಚು                 ಡಿಕಂಪೋಸರ್ ಮಳೆಗಾಲದಲ್ಲಿ ಉಪಯೋಗಿಸಿದ್ದಲ್ಲಿ ಕೊಳೆಯುವ ವಸ್ತುಗಳು ಬೇಗ ಕೊಳೆಯಲು ಸಹಕಾರಿಯಾಗುತ್ತದೆ ಇದರಿಂದ ಗೊಬ್ಬರದ ಸಾರಂಶದಿಂದ  ಕಾಯಿಗಳ ದಪ್ಪ ಆಗುವುದಕ್ಕೆ ಮತ್ತು ಹೆಚ್ಚು ಫಲಿತಾಂಶ ಕೊಡಲು ಸಹಕಾರಿಯಾಗುತ್ತದೆ ಇಳುವರಿ ಕೂಡ ದುಪ್ಪಟ್ಟಾಗುತ್ತದೆ. ವೆಸ್ಟ್ ಡಿಕಂಪೋಸರ್ ಮಾಡುವ ವಿಧಾನ  👉ಪ್ಲಾಸ್ಟಿಕ್ ಡ್ರಮ್ ನಲ್ಲಿ 200 ಲೀಟರ್ ನೀರಿನೊಂದಿಗೆ 2 ಕೆಜಿ ಪುಡಿ ಮಾಡಿದ ಬೆಲ್ಲವನ್ನು ಬೆರೆಸುವುದು. 👉ವೇಸ್ಟ್ ಕಂಪೋಸರ್ ಬಾಟಲಿಯನ್ನು ತೆಗೆದು ಅದರಲ್ಲಿರುವ ಸಂಪೂರ್ಣ ಸಾಮಗ್ರಿಯನ್ನು  ಡ್ರಮ್ ಗೆ ಬರಿ ಕೈ ನಲ್ಲಿ ಮುಟ್ಟದೆ ಹಾಕಬೇಕು. 👉 ನಂತರ ಮರದ ಕೋಲಿನಲ್ಲಿ ಪ್ರತಿದಿನ ಕಲಕಬೇಕು,  ಡ್ರಮ್ ನ ಮೇಲ್ಬಾಗ  ಭ...

ನಿಮ್ಮ ಭೂಮಿ ಬಂಜರು ಭೂಮಿ ಆಗುತ್ತೆ ಹುಷಾರು ಚೀನಾ ದಿಂದ ಬೀಜ ಬರುತ್ತೆ !!!!!

ಚೀನಾದ ಹೊಸ ತಂತ್ರ ಭಾರತದ ರೈತರು ಎಚ್ಚರ ಎಚ್ಚರ!!!!! ಹೌದು ನಿಮ್ಮ ಭೂಮಿ ಬಂಜರು ಭೂಮಿ ಮಾಡಲು ಚೀನಾ ಈಗ ಹೊಸ ತಂತ್ರ ಮಾಡಿದೆ. ನಿಮಗೆ ಅನಾಮಧೇಯ ಹೆಸರಿನಲ್ಲಿ ಯಾವುದು ಜೈವಿಕ ಬೀಜ ನಿಮ್ಮ ಮನೆಯ ಬಾಗಿಲಿಗೆ ಕೂರಿಯರ್ ಮೂಲಕ    ಪಾರ್ಸೆಲ್ ಬಂದರೆ   ಶೀಘ್ರವಾಗಿ ಕೃಷಿ ಇಲಾಖೆ ಗೆ ತಿಳಿಸಿ. ಇದರಿಂದಾಗಿ ಆಗುವ ಸಮಸ್ಯೆ ಈ ಕೆಳಗಿನಂತಿವೆ. 👉ಈ ಬೀಜಗಳು ವೈರಾಣು ಹರಡುವ                  ಸಾಧ್ಯತೆಗಳು ಇವೆ. 👉ಕೃಷಿ ಉತ್ಪನ್ನಗಳ ತಯಾರಿಕೆ ಹಾಳು ಮಾಡುವ                        ಸಾಧ್ಯತೆ ಇದೆ. 👉ರೈತರ ಆರೋಗ್ಯದ ಮೇಲೂ ಪರಿಣಾಮ ಬೀರುವ                    ಸಾಧ್ಯತೆಯಿದೆ . ಅದ್ದರಿದ ಈ ಬಗ್ಗೆ ಮಾನ್ಯ ಕೃಷಿ ಸಚಿವರು  ಕೂಡ ಸ್ಪಷ್ಟನೆ ನೀಡಿದ್ದಾರೆ ಆದ್ದರಿಂದ ರೈತರು ತುಂಬಾ ಎಚ್ಚರಿಕೆ ವಹಿಸಬೇಕು. ಇಂಡಿಯನ್ ಡಿಜಿಟಲ್ ಫಾರ್ಮರ್ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಆಗಿ ಹೊಸ ಲಾಭದಾಯಕ ಮಾಹಿತಿ ಪಡೆದುಕೊಳ್ಳಿ.   ಈ ಲಿಂಕನ್ನು  ಕ್ಲಿಕ್ ಮಾಡಿ   https://www.youtube.com/channel/UCcN1teLLBMh2hGTNYGzeDFA ಈ ವಿಷಯವನ್ನು ಎಲ್ಲರಿಗೂ ತಿಳಿ...

ಭಾರತ ದೇಶದ ಅಕ್ಕಿ ಉತ್ಪಾದನೆ ಬಗ್ಗೆ ಮಾಹಿತಿ!!!! ಕೋಟಿ ಕೋಟಿ ಟನ್

ಭಾರತ ದೇಶದಲ್ಲಿ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಮತ್ತು ಸೆನ್ಸಸ್  2011ನೇ ಇಸವಿಯ ಮಾಹಿತಿಯ ಪ್ರಕಾರ ಭಾರತ ದೇಶದಲ್ಲಿ ಸುಮಾರು 11 ಕೋಟಿ 87 ಲಕ್ಷ  ಜನರು ವ್ಯವಸಾಯವನ್ನು  ತಮ್ಮ ಮೂಲ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ  ಹಾಗೂ 14 ಕೋಟಿ 43 ಲಕ್ಷ ಜನಗಳು ವ್ಯವಸಾಯಕ್ಕೆ ಸಂಬಂಧಿಸಿದ ಕೂಲಿ ಹಾಳಾಗಿ ಪರೋಕ್ಷವಾಗಿ ಕೃಷಿಯನ್ನು ಕೃಷಿ ಅನ್ನು ನಂಬಿ ಬದುಕುತ್ತಿದ್ದಾರೆ. ಭಾರತ ದೇಶದಲ್ಲಿ ಅಕ್ಕಿ ಉತ್ಪಾದನೆ ದೇಶದ ಆರ್ಥಿಕತೆಯ ಒಂದು ಭಾಗವಾಗಿದೆ. ಭಾರತ ದೇಶವು ಪ್ರಪಂಚದಲ್ಲಿ ಅತಿ ಹೆಚ್ಚು  ಅಕ್ಕಿ  ಉತ್ಪಾದಿಸುವ  ಎರಡನೇ ದೇಶವಾಗಿದೆ. 2011 ಮತ್ತು 2012 ರಲ್ಲಿ ಭಾರತ ದೇಶವು 10 ಕೋಟಿ 43 ಲಕ್ಷದ 20 ಸಾವಿರ ಟನ್ ಅಕ್ಕಿ ಉತ್ಪಾದನೆ ಮಾಡಿದೆ. ಇದು ದೇಶದ ನಾನಾ ಪ್ರದೇಶಗಳಲ್ಲಿ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತದೆ.  ಅಕ್ಕಿ ಉತ್ಪಾದನೆ ಮೊದಲು ಪ್ರಾರಂಭವಾಗಿದ್ದು ಚೀನಾ ದೇಶದಲ್ಲಿ. ಚೀನಾದಲ್ಲಿ ಕೂಡ ಅಕ್ಕಿ ಉತ್ಪಾದನೆ ಕೋಟ್ಯಾಂತರ ಜನರ ಜೀವನವನ್ನು ಅವಲಂಬಿಸಿದೆ. ಇದು ಚೀನಾ ದೇಶದ ಅಗತ್ಯತೆಯನ್ನು ಪೂರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಕ್ಕಿ ಉತ್ಪಾದನೆ ಪ್ರಪಂಚದಲ್ಲಿ ಮೊದಲ ಸ್ಥಾನ ಚೀನಾ ಪಡೆದುಕೊಂಡರೆ ಎರಡನೇ ಸ್ಥಾನ ಭಾರತ,ಮೂರನೇ ಸ್ಥಾನ ಇಂಡೋನೇಷ್ಯಾ, ನಾಲ್ಕನೇ ಸ್ಥಾನ ಯುಎಸ್ಎ ಪಡೆದುಕೊಂಡಿದೆ. ಚೀನಾ ದೇಶವು  2011ರಲ್ಲಿ 20 ...

ಮೇಕೆ ಹಾಲಿನ ತುಪ್ಪ ಲೀಟರ್ಗೆ ಎಷ್ಟು ರೂಪಾಯಿ ಗೊತ್ತಾ??

ಮೊದಲು ಈ ಒಳ್ಳೆಯ ಮಾಹಿತಿ ಎಲ್ಲರಿಗೂ ಶೇರ್ ಮಾಡಿ ಮೇಕೆ ಹಾಲಿನ ತುಪ್ಪ ಲೀಟರ್ಗೆ ಎಷ್ಟು ರೂಪಾಯಿ ಎಂದರೆ ಪ್ರಸ್ತುತ ಆನ್ಲೈನಲ್ಲಿ ಮಾರಾಟವಾಗುತ್ತಿರುವ ಹೈ ಕ್ವಾಲಿಟಿ ಮೇಕೆ ಹಾಲಿನ ತುಪ್ಪ  ಸುಮಾರು   Rs 3625/- ರೂಪಾಯಿಗಳು. ಅಮೆಜಾನ್ ವೆಬ್ಸೈಟ್ನಲ್ಲಿ ಮಾರಾಟ ಮಾಡುತ್ತಿರುವ whitality  ಎಂಬ ಗೋಟ್ ಮಿಲ್ಕ್ ಗೀ   ಇದು ಕೋರ್ಟ್ಯಾರ್ಡ್ ಎಂಬ ಕಂಪನಿ ಸಿದ್ಧಪಡಿಸಿರುವ ಮೇಕೆಯ ಹಾಲಿನ ತುಪ್ಪವಾಗಿದೆ.  ಮೇಕೆ ಹಾಲಿನ ಉತ್ಪನ್ನಗಳು ಆಯುರ್ವೇದದಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ ಎಂಬ ಮಾಹಿತಿ ಇದೆ. ನೀವು ಕೂಡ ಈ ಮೇಕೆ ಹಾಲಿನ ಬೆಣ್ಣೆಯನ್ನು ಅಮೆಜಾನ್ನಲ್ಲಿ ಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://www.amazon.in/dp/B07H69HGD5/ref=cm_sw_r_cp_apa_i_.YDrFbEM2P0GW ಕುರಿ ಮೇಕೆ ಸಾಕಾಣಿಕೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. https://www.youtube.com/channel/UCcN1teLLBMh2hGTNYGzeDFA

D Boss ದರ್ಶನ್ ಅವರು ಕೂಡ ಮೇಕೆ ಸಾಕಾಣಿಕೆ ಮಾಡುತ್ತಾರಂತೆ ??? ನಿಜಾನಾ!!!!

ದರ್ಶನ್ ರವರು ಒಂದು ಸಂದರ್ಶನದಲ್ಲಿ ತಾವು ಮೇಕೆಗಳನ್ನು ಕೊಂಡುಕೊಳ್ಳಲು  ಬಂದಿದ್ದೇವೆ. ಎಂದು ಮಾಧ್ಯಮ ಮಿತ್ರರಿಗೆ ಹೇಳುತ್ತಾರೆ. ಕೊರೋನಾ ದಿಂದಾಗಿ ಸಾಕಷ್ಟು ಜನರು ತಮ್ಮ ಊರುಗಳಿಗೆ ಹೋಗಿ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಹೆಚ್ಚು ಒಲವು ತೋರಿಸುವ ಸಮಯದಲ್ಲಿ ದರ್ಶನ್ ಅವರ ಹೇಳಿಕೆ ತುಂಬಾ  ಸಂತಸ  ತಂದಿದೆ. ಯುವ ಪೀಳಿಗೆಯವರು ಯಾವುದಾದರೂ ಕಾರ್ಯದಲ್ಲಿ ತೊಡಗಿ ತಮ್ಮ ಆರ್ಥಿಕ ಬಲವನ್ನು ಬಲಪಡಿಸಿಕೊಳ್ಳಲು ದರ್ಶನ್ ರವರ ಹೇಳಿಕೆ ತುಂಬಾ ಸಹಕಾರಿಯಾಗಿದೆ. ಹೌದು ಈ ಮಾತು ನಿಜ ದರ್ಶನ್ ಅವರು ಗೋಟ್ ಫಾರ್ಮಿಂಗ್ ಮಾಡಲು ಮೇಕೆಗಳನ್ನು ಖರೀದಿಸುವ ಬಗ್ಗೆ  ಹೇಳಿಕೆ ನೀಡಿದ್ದಾರೆ. ದರ್ಶನ್ ಅವರು ಈ ಹೇಳಿಕೆ ನೀಡುವ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. https://www.instagram.com/p/CELLSKTAuqf/?igshid=v9f83sngfg31

ಮೇಕೆ ಸಾಕಾಣಿಕೆ ಮೇಕೆ ಹಾಲು ಲೀಟರಿಗೆ Rs 2000 ವೈಜ್ಞಾನಿಕವಾಗಿ ಮಾಡಿ ಅದರಿಂದ ಹೆಚ್ಚು ಆದಾಯ ಪಡೆಯುವುದು ಹೇಗೆ

ಮೇಕೆ ಸಾಕಾಣಿಕೆ ಮಾಡಿ ಹೆಚ್ಚು ಆದಾಯ ಗಳಿಸುವುದು ಹೇಗೆ ?? ಮೊದಲ ಈ ಮಾಹಿತಿ ಯನ್ನೂ ಎಲ್ಲ ವಾಟ್ಸ್ ಆ್ಯಪ್ ಗ್ರೂಪ್ ಗಳಿಗೆ ಶೇರ್ ಮಾಡಿ  NDTV ಅವರ ಮಾಹಿತಿ ಪ್ರಕಾರ 2015 ರಲ್ಲೀ ಮೇಕೆ ಹಾಲು ಸುಮಾರು  ಒಂದು ಲೀಟರಿಗೆ  500-2000 ರೂಪಾಯಿ ಗಳಿಗೆ ಮಾರಾಟವಾಗಿದೆ. ಮೇಕೆ ಹಾಲು ಡೆಂಗ್ಯೂ ಫೀವರ್ ಅಂತ ರೋಗಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಇದು ಪ್ಲೇಟ್ಲೆಟ್ ಕೌಂಟ್ ಡೆಂಗ್ಯೂ ರೋಗಿಯಲ್ಲಿ ಹೆಚ್ಚು ಮಾಡುತ್ತದೆ ಮತ್ತು ಡೆಂಗ್ಯು ರೋಗಿಯು ಶೀಘ್ರವಾಗಿ ಗುಣಮುಖನಾಗುತ್ತಾನೆ  ಎಂದು ಆಯುರ್ವೇದದ ವೈದ್ಯರೊಬ್ಬರು ಸಮರ್ಥಿಸಿಕೊಂಡಿದ್ದಾರೆ.  ಆಯುರ್ವೇದದಲ್ಲಿ ಮೇಕೆ ಹಾಲು ಔಷಧಿ ರೂಪದಲ್ಲಿ ಬಳಸಲಾಗುತ್ತಿದೆ ಆದ್ದರಿಂದ ಮೇಕೆ ಸಾಕಾಣಿಕೆ ಮಾಡುವವರು ಮೇಕೆ ಹಾಲು ಉತ್ಪಾದನೆ ಗೆ ಹೆಚ್ಚು ಮಾಡುವ ಕಡೆ ಗಮನ ಕೊಡಬೇಕು. ಪ್ರಸ್ತುತ ಮೇಕೆ ಹಾಲು  ಆನ್ಲೈನ್ ಮಾರುಕಟ್ಟೆಯಲ್ಲಿ ಕೂಡ ಲಭ್ಯವಿದೆ   ಮೇಕೆ ಹಾಲು 200ml ಗಳ ಮೂರು ಬಾಟಲಿಗಳಿಗೆ  ಸುಮಾರು ₹348 ಇದೆ.  ಈ ಹಾಲಿನ ಮಾರಾಟ ಮಾಡಲು ನಿಮ್ಮ ಹತ್ತಿರದ ಕೃಷಿ ಕೇಂದ್ರ ಅಥವಾ ನಿಮಗೆ ಹತ್ತಿರದ ಆಯುರ್ವೇದ ಹಾಸ್ಪಿಟಲ್ ಅನು  ವಿಚಾರಿಸಿ. ಕುರಿ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೀಲಿ ಲಿಂಕನ್ನು ಕ್ಲಿಕ್ ಮಾಡಿ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ. https://...

copra details ಕೊಬ್ಬರಿ ಬಗ್ಗೆ ಮಾಹಿತಿ

ಕೊಬ್ಬರಿ ಸುಲಿಯುತ್ತಿರುವ ದೃಶ್ಯ ಕಲ್ಪತರು ನಾಡು ತುಮಕೂರು ಕೊಬ್ಬರಿಗೆ ಪ್ರಸಿದ್ಧಿಯಾಗಿದೆ,  ಕೊಬ್ಬರಿಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ನೋಡೋಣ ಬನ್ನಿ ಕೊಬ್ಬರಿ ಬೆಲೆ  ಇಂದು Rs 11,500 ರೂಪಾಯಿಗಳಿಗೆ ಮರಾಟ ಆಗುತ್ತಿದೆ ,ಇದು ಮಾರುಕಟ್ಟೆ ಚೆನ್ನಾಗಿದ್ದಾಗ ಸುಮಾರು Rs 20,000 ತನಕ ಪ್ರತಿ ನೂರು ಕೆಜಿಗೆ ವ್ಯಾಪಾರವಾಗುತ್ತದೆ. ತೆಂಗಿನಕಾಯಿಗಳನ್ನು ಸುಮಾರು ಹತ್ತರಿಂದ ಹನ್ನೊಂದು ತಿಂಗಳು ಗಾಳಿ  ಸಾವಕಾಶವಾಗಿ ಹರಿದಾಡುವ ಜಾಗದಲ್ಲಿ ಶೇಖರಣೆ ಮಾಡಿದರೆ ತೆಂಗಿನಕಾಯಿಗಳು ಕೊಬ್ಬರಿ ಆಗಿ ಪರಿವರ್ತನೆಯಾಗುತ್ತದೆ. ತೆಂಗಿನಕಾಯಿಗಳನ್ನು ನೀವು ಸಂತೆ,ಕೃಷಿ ಮಾರುಕಟ್ಟೆ ಕೊಂಡಿ ಕೊಂಡು ಕಬ್ಬಿಣದ ಕಾಯಿ ಶೆಡ್ ಅಥವಾ ಮನೆಯಲ್ಲಿ ಅಟ್ಟಗಳನ್ನು ಮಾಡಿ ಶೇಖರಿಸಿ ಕೊಬ್ಬರಿಯನ್ನು ಮಾಡಬಹುದಾಗಿದೆ.  ಕೊಬ್ಬರಿ ಅಥವಾ ತೆಂಗಿನ ಕಾಯಿ ಶೆಡ್ ಶೇಖರಣೆ ಫೋಟೋ ತೆಂಗಿನ ಕಾಯಿ ಬೆಲೆಯನ್ನು ನೋಡಿ ನೀವು ಸೂಕ್ತ ಸಮಯದಲ್ಲಿ ಕಾಯಿಗಳನ್ನು ಕೊಂಡಿ ಕೊಂಡಲ್ಲಿ ನೀವು ಕೂಡ ಲಕ್ಷ ಲಕ್ಷ ಆದಾಯಗಳಿಸಬಹುದು. ತೆಂಗಿನಕಾಯಿಗಳ ಆಯ್ಕೆ ತೆಂಗಿನಕಾಯಿಗಳನ್ನು ಕೊಳ್ಳುವಾಗ ಅವುಗಳ ರೂಪ, ತೂಕ  ಮತ್ತು  ಆಕಾರ ನೋಡಿ  ಕೊಳ್ಳಬೇಕು, ನೀರಾವರಿ ಜಮೀನಿನಲ್ಲಿ ಬೆಳೆದ  ಸುಮಾರು ಒಂದು ತೆಂಗಿನ ಕಾಯಿಗಳ ತೂಕ 130 ಗ್ರಾಂ ನಿಂದ 200 ಗ್ರಾಮ್ ವರೆಗೂ  ಕೊಬ್ಬರಿ ತೂಕ ಬರುತ್ತದೆ. ಈ ರೀತಿ ಶೇಖರಿಸಿಟ್ಟ ತೆಂಗಿನ ಕೊಬ್ಬರಿಯ...

ಸುಲಭವಾಗಿ ಮಂಗಗಳು ಅಥವಾ ಕೋತಿಗಳನ್ನು ಓಡಿಸುವ ಹೊಸ ವಿಧಾನ

ಮಂಗಗಳನ್ನು ಓಡಿಸಲು ಹೊಸ ಪ್ರಯೋಗ ಒಂದು ಕಬ್ಬಿಣದ ಸಲಾಕೆ ಅಥವಾ ಪೈಪನ್ನು ಉಪಯೋಗಿಸಿಕೊಂಡು ಯಾವ ರೀತಿ ಮಂಗಗಳನ್ನು ಓಡಿಸುವುದು ಎಂದು ಕರ್ನಾಟಕದ ರೈತರೊಬ್ಬರು ಈ ರೀತಿಯ ಪ್ರಯೋಗವನ್ನು ಮಾಡಿದ್ದಾರೆ. ಮಂಗಗಳನ್ನು ಸುಲಭವಾಗಿ ಭಯ ಹುಟ್ಟಿಸುವುದರ ಮೂಲಕ ಓಡಿಸಬಹುದು,ರಾಕೆಟ್ ಪಟಾಕಿ ಗಳನ್ನು ಉಪಯೋಗಿಸಿಕೊಂಡು ಈ ಕಾರ್ಯವನ್ನು ಆರಾಮವಾಗಿ ಮಾಡಬಹುದು ಎಂದು ಈ ರೈತರು  ಅಭಿಪ್ರಾಯಪಟ್ಟಿದ್ದಾರೆ. ಈ ಕೆಳಗಿನ ಫೋಟೋದಲ್ಲಿ ನೀವು ನೋಡುತ್ತಿದ್ದೀರಾ ಈ ಉಪಕರಣಗಳನ್ನು ಬಳಸಿಕೊಂಡು ಮಂಗಗಳನ್ನು ಓಡಿಸುವ ವಿಧಾನ. ಮಂಗಗಳು ಇರುವ ಕಡೆ ಈ ರೀತಿ ರಾಕೆಟ್ ಪಟಾಕಿಯನ್ನು ಉಡಾಯಿಸು ವುದರ ಮೂಲಕ ಮಂಗಗಳ ಓಡಿಸಬಹುದು. ಚೌಕಾಕಾರದ ಮಧ್ಯಭಾಗದಿಂದ ಹೊರಟ ಕೈ  ಹಿಡಿಯುಳ್ಳ ಕಬ್ಬಿಣದ ಪೈಪ್ ,ಚೌಕಾಕಾರದ ಭಾಗದಲ್ಲಿ ಕೆಂಪು ಬಣ್ಣವನ್ನು ಬಳಸಿದ ಕಾರಣವೇನೆಂದರೆ ಕೆಂಪು ಬಣ್ಣವು ಅತ್ಯಂತ ದೂರದವರೆಗೂ ಕೂಡ ಕಾಣಬಹುದಾದ ಬಣ್ಣವಾಗಿದೆ.ಈ ಚೌಕಾಕಾರದ ಬಣ್ಣ ನಿಂದ ಹೊರಟ ರಾಕೆಟ್ ಪಟಾಕಿ ಮಂಗಗಳು ಮುಂದೆ ಸಿಡಿಯುವುದರಿಂದ ಅವು ಈ ಕೆಂಪು ಬಣ್ಣದ ವಸ್ತುವಿನಿಂದ ಪಟಾಕಿ ಬಂದಿದೆ ಎಂದು ಭಾವಿಸಿ ದೂರ ಓಡಿ ಹೋಗುತ್ತವೆ. ಈ ರೀತಿ ಮಾಡುವುದರಿಂದ ಮಂಗನಿಂದ ಆಗುತ್ತಿರುವ ಬೆಳೆ ಹಾನಿ ಯನ್ನು ತಡೆಗಟ್ಟಬಹುದು.       ಎಚ್ಚರಿಕೆ ! ಬೇಸಿಗೆ ಕಾಲದಲ್ಲಿ ಈ ಉಪಕರಣವನ್ನು  ಉಪಯೋಗಿಸುವುದು ಅಷ್ಟು ಸೂಕ್ತವಲ್ಲ ಯಾಕೆಂದರೆ ಒಣಹುಲ್...

ಕುರಿ ಮತ್ತು ಮೇಕೆ ಸಾಕಾಣಿಕೆ ಕೆಲವು ಸಲಹೆಗಳು

ಕುರಿ ಮತ್ತು ಮೇಕೆ ಸಾಕಾಣಿಕೆ ಕೆಲವು ಸಲಹೆಗಳು ಕುರಿ-ಮೇಕೆ ಸಾಕಾಣಿಕೆ ಮಾಡುವಾಗ ಪಶುವೈದ್ಯರ ಸಲಹೆ ಸೂಚನೆಗಳನ್ನು ಪಡೆಯಬೇಕು. ಕಾಲಕಾಲಕ್ಕೆ ಮುಂಜಾಗೃತವಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ರಾಸುಗಳಿಗೆ ಕಾಯಿಲೆಗಳು ಬಾರದಂತೆ ಎಚ್ಚರಿಕೆವಹಿಸಬೇಕು. ಅವರು ಯಾವ ಕಾಲಕ್ಕೆ ಯಾವ ಲಸಿಕೆಯನ್ನು ಹಾಕಿಸಬೇಕು. ಅವುಗಳ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ವಿವರವಾಗಿ ತಿಳಿದುಕೊಂಡಿರಬೇಕು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆಯಬೇಕಾದರೆ ಮೊದಲು ಸ್ಥಳೀಯ ಕುರಿ ಪೋಷಕರ ಸಂಘದಲ್ಲಿ ಸದಸ್ಯತ್ವವನ್ನು ಪಡೆಯಬೇಕು. ಈ ರೀತಿ ಸದಸ್ಯರಾಗುವುದರಿಂದ ವಿಮಾ ಸೌಲಭ್ಯ, ಕುರಿಸಾಕಾಣಿಕೆದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ರಿಯಾಯಿತಿ ದರದಲ್ಲಿ ಅಭಿವೃದ್ಧಿಪಡಿಸಿರುವಂತಹ ಉತ್ತಮ ತಳಿಯ ಟಗರು ಸೇರಿದಂತೆ ಇನ್ನು ಅನೇಕ ಸವಲತ್ತುಗಳು ದೊರೆಯಲಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕುರಿಸಾಕಾಣಿಕೆ ಮಾಡಬೇಕು. ಕೆಲವರು ಕುರಿಗಳ ಶೆಡ್‌ಗಳನ್ನು ನಿರ್ಮಿಸಿ ಉತ್ತಮ ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಸ್ವಂತ ಬಂಡವಾಳ ಹೂಡಿ ವಿವಿಧ  ಕುರಿಗಳನ್ನು ಸಾಕುತ್ತಿದ್ದಾರೆ. ಒಣಹುಲ್ಲು, ರೇಷ್ಮೆ ಸೊಪ್ಪು, ಇತರೆ ಸೊಪ್ಪುಗಳನ್ನು ಮೇವಿಗಾಗಿ ಬಳಸಲಾಗುತ್ತಿದೆ. ಇನ್ನು ದಷ್ಟಪುಷ್ಟವಾಗಿ ಕುರಿಗಳ ತೂಕ ಹೆಚ್ಚಿಸಲು ಹಿಂಡಿ, ಬೂಸ, ರಾಗಿ ಮುದ್ದೆ ನೀರು ಸಕಾಲಕ್ಕೆ ನೀಡಲಾಗುತ್ತದೆ. ಶೆಡ್‌ಗಳನ್ನು ನಿರ್ಮಿಸದೆ ಇರುವ ಹಾಗೂ ...

goat farming information in kannada

                                                                         goat farming information   ಕರ್ನಾಟಕದ ರೈತರು, [07.08.20 12:27] ಕುರಿ ಸಾಕಾಣಿಕೆ ಮಾಹಿತಿ 1)ವೈಜ್ಞಾನಿಕ ಕುರಿ ಶೆಡ್ ಹೊರಭಾಗದ ಮಾಹಿತಿ ನೋಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://youtu.be/jd9C3DQxjbQ 2) ವೈಜ್ಞಾನಿಕ ಕುರಿ ಶೆಡ್ ಒಳಭಾಗದ ಮಾಹಿತಿ ನೋಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://youtu.be/rMIlSpMH7E0 3) ವೈಜ್ಞಾನಿಕ ರೀತಿಯ ಕುರಿ ಶೆಡ್ ಮಾಡಲು ಬೇಕಾದ ಹಣದ  ಬಗ್ಗೆ ಮಾಹಿತಿ ನೋಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://youtu.be/L8pnlsQtDYA ಇಂತಹ ಒಳ್ಳೆಯ ಮಾಹಿತಿಯನ್ನು ಶೇರ್ ಮಾಡಿ